Posts

Showing posts from December, 2022

ಕವನ : ಜೀWon

ಜೀWon ಹುಟ್ಟಿಗಾಗಿ ಹೋರಾಟ ಸಾಯದೇ ಇರುವುದಕೆ ಹೋರಾಟ ಹುಟ್ಟು ಸಾವುಗಳ ಮಧ್ಯೆಯೂ ಜೀವಿಸುವುದರ ಹೋರಾಟ ಇಷ್ಟು ಸಾಲುವುದಿಲ್ಲ ಎಂಬ ಹುಂಬತನ ಬೇಡದೆ ಇರುವ ವಿಚಾರಗಳಿಗೂ ಹೋರಾಟ ಇಷ್ಟೇನಾ ಜೀವನ? ಪರಸ್ಪರ ಪ್ರೀತಿಸಿ, ಆನಂದಿಸಿ ಜೀವನದ ಪ್ರತಿ ಕ್ಷಣಗಳನು ಅನುಭವಿಸಿ ಹೀಗೂ ಬದುಕಬಹುದೆಂದು ತೋರಿಸಿ ಜೀವನ ದಾರಿಯಾಗಿರುಹುದು ಅದರಲ್ಲಿ ದಾರಿದೀಪವಾಗಿರಿ!

Expectations and Exceptions

 What is love? Oh baby, don't hurt me Don't hurt me ... ... No, I don't know why you're not fair I give you my love, but you don't care So what is right and what is wrong? Gimme a sign ...  Let us consider only these lines from Haddaway. Why didn't one care even when he/she is loved? Why is there a question of right or wrong? What it means to give a sign? I have my own thoughts about relationships that involve love, "unconditional love." Is love unconditional? Is there no expectation from persons who are in love with each other? How much one forgive or ignore the weakness or negative things of another person with whom he/she is in love? When we talk about love, it is not necessarily between a girl and a boy. Love can be between two persons irrespective of gender and kind of relationship. Love is that emotion between mother and son, father and son, mother and daughter, teacher and student, husband, and wife, etc. A teacher loves his brightest student be...

ಮದುವೆಯಲ್ಲಿ ಗೊಡವೆ

ನಮ್ಮ ಎಂಜಿನಿಯರಿಂಗ್ ಕಾಲೇಜಿನ ದಿನಗಳು ಮುಗಿದು, ಸ್ನೇಹಿತರಾಗಿದ್ದ ನಮ್ಮಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಬೇರೆಯಾಗಿದ್ದೆವು. ಒಂದು ಸಾಮೂಹಿಕ ಭೇಟಿಗೆ ಹಾತೊರೆಯುತ್ತಿದ್ದ ಮನಸುಗಳು ನಮ್ಮವಾಗಿದ್ದವು. ನಮ್ಮ ಸ್ನೇಹಿತನು ಮೈಸೂರಿನಲ್ಲಿ ಆಗುತ್ತಿದ್ದ ಮದುವೆಗೆ ಆಮಂತ್ರಣ ಬಂದಾಗ, ಎಲ್ಲರಲ್ಲೂ ಖುಷಿಯ ನರ್ತನ. ಆಗ ಈಗಿನಂತೆ ವಾಟ್ಸಾಪ್ ಇರಲಿಲ್ಲ. ಎಲ್ಲವೂ ಈಮೇಲ್ ಮತ್ತು ಫೋನಿನ ಮುಖಾಂತರ ಎಲ್ಲರ ಸಂಗಡ ಚರ್ಚೆ ಮಾಡಿ ಒಂದು ದಿನ ಮುಂಚಿತವಾಗಿ ಹೋಗೋಣ ಎಂದು ತೀರ್ಮಾನ ಮಾಡಿದೆವು. ಎಣ್ಣೆ ಪಾರ್ಟಿ ಅಂತ ಕೆಲವರು ಸಿದ್ಧತೆ ಶುರು ಹಚ್ಚಿಕೊಂಡಿದ್ದರು. ಅದೇ ಮದುವೆಯ ಎಣ್ಣೆ ಪಾರ್ಟಿಯಲ್ಲಿ ಒಂದು ನೆನಪಿಡುವಂತಹ ಗೊಡವೆ ನಡೆಸಲು ವಿಧಿ ತಯಾರು ನಡೆಸಿತ್ತು. ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಮಾಡುವೆ ನಿಶ್ಚಯವಾಗಿತ್ತು. ನಾವೆಲ್ಲರೂ ಹಿಂದಿನ ದಿನವೇ ಹೋಗಿ, ವರನಾದ ಸ್ನೇಹಿತನನ್ನು ಭೇಟಿ ಮಾಡಿ ಒಂದಷ್ಟು ಕಾಲ ಕಳೆದೆವು. ಸಂಜೆಯಾಗುತ್ತಿದ್ದ ಹಾಗೆ, ಬೇರೆ ಊರುಗಳಲ್ಲಿದ್ದ ಮಿಕ್ಕ ಸ್ನೇಹಿತರು ಬಂದರು. ಅಲ್ಲೇ ಕಲ್ಯಾಣ ಮಂಟಪದ ಪಕ್ಕದಲ್ಲಿದ್ದ ಸುಸಜ್ಜಿತವಾದ ರೂಮುಗಳನ್ನು ಬುಕ್ ಮಾಡಿದ್ದೆವು. ರಾತ್ರಿ ಬೇಗನೆ ಊಟ ಮುಗಿಸಿ, ರೂಮಿಗೆ ಬಂದು, ಮಾತಿನ ಚಟವನ್ನು ಪೂರೈಸಿಕೊಂಡೆವು. ಸುಮಾರು ತಿಂಗಳುಗಳ ಕಾಲ ಯಾರು ಭೇಟಿ ಆಗಿರಲಿಲ್ಲ. ಹಾಗಾಗಿ ಅಂದಿನ ಸಮಯ ನಮಗೆಲ್ಲಾ ಸಂತೋಷ ತರುತಿತ್ತು. ಯಾರು ಏನು ಮಾಡುತ್ತಿದ್ದಾರೆ, ಅವರ ಕಾಲೇ...

ದೇವರಿದ್ದಾರಾ?

ಸುಮಾರು ವರ್ಷಗಳ ಹಿಂದೆ ನಡೆದಿದ್ದು. ಒಂದು ಭಾನುವಾರ ನಾನು, ನನ್ನ ಪತ್ನಿ ಹಾಗು ನಮ್ಮ ಆರು ವರ್ಷದ ಮಗ ಬೆಳಗ್ಗೆನೇ ಎದ್ದು, ಹೊಸದಾಗಿ ಕೊಂಡಿದ್ದ ಆಲ್ಟೊ ಕಾರಿನಲ್ಲಿ ಒಂದು ದಿನದ ಪಯಣಕ್ಕೆ ಹೊರಟೆವು. ದಾರಿಯಲ್ಲಿ ಹೋಗುತ್ತಾ, ಎಲ್ಲಿ ಹೋಗೋಣ ಎಂದು ಯೋಚಿಸಿ, ಭೀಮೇಶ್ವರಿ ಜಂಗಲ್ ಲಾಡ್ಜಿಗೆ ಹೋಗೋಣ ಅಂತ ತೀರ್ಮಾನಿಸಿದೆವು. ಮುಂಚಿತವಾಗಿ ಅಲ್ಲಿ ಬುಕ್ ಮಾಡಬೇಕೆಂಬುದು ಅರಿವಿರಲಿಲ್ಲ. ಈ ತೀರ್ಮಾನ ಕೈಗೊಳ್ಳುವಷ್ಟರಲ್ಲಿ ನಾವಾಗಲೇ ಕನಕಪುರದ ಹತ್ತಿರ ಬಂದಿದ್ದೆವು. ಅಲ್ಲಿ ಒಂದು ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿ, ಅಲ್ಲಿಯೇ ಇದ್ದ ಒಂದು ಹೋಟೆಲಿನಲ್ಲಿ ಇಡ್ಲಿ, ವಡೆ ಮತ್ತು ಉಪ್ಪಿಟ್ಟು ತಿಂದೆವು. ಪುನಃ ರಸ್ತೆಗಿಳಿದ ಕಾರು ಭೀಮೇಶ್ವರಿ ಕಡೆ ಹೊರಟಿತು.  ಒಂದು ಗ್ರಾಮದ ಹೆಬ್ಬಾಗಿಲಲ್ಲಿ ಒಂದಷ್ಟು ಹುಡುಗರು ನಿಂತು, ಬರುತಿದ್ದ ಎಲ್ಲ ಕಾರುಗಳನ್ನು ನಿಲ್ಲಿಸಿ, ಚಂದ ವಸೂಲಿ ಮಾಡುತ ಇದ್ದರು. ನಮ್ಮನ್ನು ನಿಲ್ಲಿಸಿ, ಇಪ್ಪತ್ತು ರೂಪಾಯಿಗಳ ವಂತಿಕೆ ಪಡೆದು, ಒಂದು ರಸೀತಿ ಕೊಟ್ಟು ಕಳುಹಿಸಿದರು. ಸ್ವಲ್ಪ ಮುಂದೆ ಹೋಗುತ್ತಿದಂಗೆ, ಒಬ್ಬ ತೀರಾ ಮುದುಕನೂ ಅಲ್ಲ, ತೀರಾ ಮಧ್ಯವಯಸ್ಕನೂ ಅಲ್ಲದ ವ್ಯಕ್ತಿ ಕೈ ತೋರಿಸಿ ನಮ್ಮನ್ನು ತಡೆ ಹಿಡಿದನು. ನಾನು ನಿಲ್ಲಿಸಿ, ಕಿಟಕಿಯ ಗಾಜನ್ನು ಕೆಳಗಿಳಿಸಿದೆ. ಆತ "ನಾನು ಜೊತೆಯಲಿ ಬರುವೆ, ಸ್ವಲ್ಪ ಮುಂದೆ ನನ್ನನ್ನು ಇಳಿಸಿ" ಎಂದು ಕೋರಿದಾಗ, ನಾನು ಮತ್ತು ಪತ್ನಿ, ಇಬ್ಬರೂ ಮುಖ ಮುಖ ನೋಡಿಕೊಂಡು, ಕಣ್ಣಲ್ಲ...