Posts

Showing posts from October, 2024

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

 ಒಂದೂರಿನ ಶಾಂತವಾದ ನೆರೆಹೊರೆಯಲ್ಲಿ ನಾವೊಂದು ಮನೆಯನ್ನು ಕಟ್ಟಿಕೊಂಡು ಜೇವನವನ್ನು ಆನಂದಿಸುತ್ತಾ  ಕಳೆಯುತ್ತಿದ್ದೆವು. ಮನೆ ಕೆಲಸದವರ ಕೊರತೆಯಿಂದಾಗಿ, ಮನೆಯನ್ನು ಸ್ವಚ್ಛವಾಗಿ ಇರಿಸಲು ಒಂದು ರೋಬೊ ವಾಕ್ಯೂಮ್ ಅನ್ನು ಖರೀದಿ ಮಾಡಿದ್ದೆವು. ಅದು ಪ್ರತಿ ದಿನ ಮನೆಯ ಪ್ರತಿ ಮಹಡಿಯ ನೆಲವನ್ನು ಗುಡಿಸಿ ತನ್ನ ಪಾಡಿಗೆ ಒಂದು ಮೂಲೆಯಲ್ಲಿ ಇಟ್ಟಿದ್ದ ಚಾರ್ಜಿಂಗ್ ಸ್ಟೇಷನ್ ಮೇಲೆ ವಿರಮಿಸುತಿತ್ತು. ವಾರಕ್ಕೊಮ್ಮೆ ನಾವು ಸಾರಿಸಿಕೊಳ್ಳುತ್ತಿದ್ದೆವು. ಜೀವನ ಸರಳವಾಗಿತ್ತು. ನನ್ನ ಗೆಳೆಯ ಒಬ್ಬ IoT ತಂತ್ರಜ್ಞ. ಅವನ ಜೊತೆ ಕೂಡಿ, ಏನೇನೋ ಸರ್ಕಸ್ ಮಾಡಿ, ರೋಬೊ ಲಿಫ್ಟ್ ಹತ್ತಿರ ಬಂದು ಒಂದು ನಿಮಿಷದ ಕಾಲ ನಿಂತಾಗ, ಲಿಫ್ಟ್ ತನ್ನಂತಾನೆ ಬಾಗಿಲು ತೆಗೆಯುವಂತೆ ಮಾಡಿ, ಮತ್ತು ಲಿಫ್ಟಿನಲ್ಲೂ ಕೆಲವು ಲಾಜಿಕ್ ಬೋರ್ಡ್ ಹಾಕಿ, ರೋಬೊ ಪ್ರತಿ ಹಂತಕ್ಕೆ ಹೋಗುವಂತೆ ಮಾಡಿದ್ದ. ಇದರಿಂದಾಗಿ, ರೋಬೊ ಗಡಿಯಾರದಂತೆ ತನ್ನ ದಿನಚರಿಯನ್ನು ಪಾಲಿಸುತಿತ್ತು. ಆದರೆ ಜೀವನವು ಅದರದ್ದೇ ಆದ ನಿಗೂಢತೆ ಹಾಗು ಅನಿರೀಕ್ಷಿತತೆ ಹೊಂದಿರುತ್ತೆ. ಅಲ್ಲವೇ? ಕೆಲವು ವಾರಗಳ ನಂತರ, ನಮ್ಮ ಪಕ್ಕದ ಮನೆಯವರು ಸಹ ರೋಬೋ ವ್ಯಾಕ್ಯೂಮ್ ಅನ್ನು ಖರೀದಿ ಮಾಡಿ ಬಳಸಲು ಶುರು ಮಾಡಿದರು. ನನ್ನ ಬಳಿ ಬಂದು ಸ್ವಲ್ಪ ವಿಚಾರ ಕೂಡ ಮಾಡಿದ್ದರು. ಆದರೆ, ಕೊನೆಗೆ ಅವರು ಬೇರೆ ಕಂಪನಿಯ ರೋಬೊಗೆ ಮೊರೆ ಹೋಗಿದ್ದರು. ಒಂದು ಸಂಜೆ ನಾನು ವಿಚಿತ್ರವನ್ನು ಗಮನಿಸಿದೆ. ನನ್ನ ರೋಬೋ ಲಿವಿಂಗ್ ರೂಮ್ ಕಿಟಕಿ...